ಧರ್ಮಭಾರತಿ
‘ಧರ್ಮಭಾರತೀ’
ಶಾಶ್ವತಮೌಲ್ಯಗಳನ್ನು ಸಕಾಲಿಕವಾಗಿ ಸಾರುವ ಮಾಸಿಕ. ಸನಾತನಧರ್ಮದ ಲೋಕಹಿತಕರವಾದ ಮೌಲ್ಯಗಳನ್ನು ಬಿತ್ತರಿಸುವ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂಕಲ್ಪವೇ ಪತ್ರಿಕೆಯ ಹುಟ್ಟಿಗೆ ಕಾರಣ. ಏಳು ವರ್ಷಗಳ ಈ ಪಯಣದಲ್ಲಿ ಅಸಂಖ್ಯ ವಿಷಯಗಳನ್ನು ಪತ್ರಿಕೆ ಸ್ಪರ್ಶಿಸಿದೆ. ಸನಾತನಧರ್ಮ ಬಗೆದಷ್ಟೂ ಬರಿದಾಗದ ಅನರ್ಘ್ಯ ಗಣಿ. ಆದರೂ ಈ ಗಣಿಯ ಉದ್ದಗಲಗಳ ಹೊರನೋಟ ಪತ್ರಿಕೆಯಿಂದ ಸಾಧ್ಯವಾಗಿದೆ
ಶ್ರೀರಾಮಚಂದ್ರಾಪುರ ಮಠ
ಸನಾತನ ಧರ್ಮದ ಉದ್ಧಾರಕ್ಕಾಗಿ ಆದಿ ಶಂಕರಾಚಾರ್ಯರ ಶಿಷ್ಯ ಸುರೇಶ್ವರಾಚಾರ್ಯರಿಂದ ಗೋಕರ್ಣದ ಅಶೋಕ ಎನ್ನುವ ಸ್ಥಳದಲ್ಲಿ ಶ್ರೀರಾಮಚಂದ್ರಾಪುರ ಮಠ ಪ್ರಾರಂಭವಾಯಿತು. ಶ್ರೀರಾಮಚಂದ್ರಾಪುರ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜಗತ್ತಿನ ಏಕಮಾತ್ರ ಅವಿಚಿನ್ನ ಪರಂಪರೆಯನ್ನು ಒಳಗೊಂಡಿರುವುದು ಮಠದ ವಿಶೇಷ.
ಶ್ರೀರಾಮಚಂದ್ರಾಪುರ ಮಠ