ಅಮೃತಸತ್ವ

ಸಾವಯವ ಕೃಷಿ ವಿಧಾನದಿಂದ ಭೂಮಿಯ ಅಂತಹಃಸತ್ವ ಕಾಯ್ದ ವಿಷರಹಿತ ಅಮೃತತುಲ್ಯ ಆಹಾರದ ಮೂಲಕ ಜೀವನದ ಗುಣಮಟ್ಟವನ್ನು ಸತ್ವಪೂರ್ಣವಾಗಿಸುವ ವಿಶಿಷ್ಟ ಯೋಜನೆ.

ಶ್ರೀ ಮಠವು ವಿಚಾರ ಸಂಕಿರಣ, ಕಾರ್ಯಾಗಾರ, ಪ್ರಾತ್ಯಕ್ಷಿಕೆಗಳ ಮೂಲಕ ಕೃಷಿಕರಿಗೆ ಸಾವಯವ ಗೊಬ್ಬರದ ಮಹತ್ವ ಹಾಗೂ ಕೀಟನಾಶಕಗಳ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಯಪಡಿಸುತ್ತಿದೆ.

ಶ್ರೀಮಠದ ಮಾರ್ಗದರ್ಶನದಲ್ಲಿ ಕರ್ನಾಟಕ ಹಾಗೂ ಕೇರಳದ ಬಹಳಷ್ಟು ಕೃಷಿಕರು ಸಾವಯವ ಪದ್ಧತಿಯನ್ನು ಅನುಸರಿಸುತ್ತಿದ್ಧಾರೆ.

ದೇಶೀ ತಳಿಗಳನ್ನು ಬಳಸಿ ಕೃಷಿಯನ್ನು ನಡೆಸಲು ಪ್ರೋತ್ಸಾಹಿಸಲಾಗುತ್ತಿದೆ.

ಸಾವಯವ ಪದ್ಧತಿಯಲ್ಲಿ ಉತ್ಪಾದಿಸಿದ ಅಕ್ಕಿ, ಬೇಳೆ ಕಾಳುಗಳು, ಸಾಂಬಾರು ಪದಾರ್ಥಗಳನ್ನು ಯೋಗ್ಯದರದಲ್ಲಿ ವಿತರಿಸುವ ವ್ಯವಸ್ಥೆಯನ್ನು ಶ್ರೀ ಮಠವು ಕೈಗೊಂಡಿದೆ.

ಮಳೆಕೊಯ್ಲು ಹಾಗೂ ಇತರೇ ಜಲಸಂವರ್ಧಿನಿ ವಿಧಾನಗಳನ್ನು ಕ್ರುಷಿಕರಿಗೆ ಪರಿಚಯಿಸುತ್ತಿದೆ.