ಪತ್ರಿಕೆ

‘ಧರ್ಮಭಾರತೀ’

ಶಾಶ್ವತಮೌಲ್ಯಗಳನ್ನು ಸಕಾಲಿಕವಾಗಿ ಸಾರುವ ಮಾಸಿಕ.  ಸನಾತನಧರ್ಮದ ಲೋಕಹಿತಕರವಾದ ಮೌಲ್ಯಗಳನ್ನು  ಬಿತ್ತರಿಸುವ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂಕಲ್ಪವೇ ಪತ್ರಿಕೆಯ ಹುಟ್ಟಿಗೆ ಕಾರಣ.  ಏಳು ವರ್ಷಗಳ ಈ ಪಯಣದಲ್ಲಿ ಅಸಂಖ್ಯ ವಿಷಯಗಳನ್ನು ಪತ್ರಿಕೆ ಸ್ಪರ್ಶಿಸಿದೆ.  ಸನಾತನಧರ್ಮ ಬಗೆದಷ್ಟೂ  ಬರಿದಾಗದ ಅನರ್ಘ್ಯ ಗಣಿ.  ಆದರೂ ಈ ಗಣಿಯ ಉದ್ದಗಲಗಳ ಹೊರನೋಟ ಪತ್ರಿಕೆಯಿಂದ ಸಾಧ್ಯವಾಗಿದೆ

ಸನಾತನ ಮಹರ್ಷಿಗಳು ತಮ್ಮ ತಪೋಭೂಮಿಯಲ್ಲಿ ಅರಳಿದ ದಿವ್ಯ ಮೌಲ್ಯಗಳ ಸದಾ ಬಾಡದ ಪುಷ್ಪಗಳನ್ನು ಈ ಭರತಭೂಮಿಯಲ್ಲಿ ಅರಳಿಸಿದ್ದಾರೆ.  ಅದರ ದಿವ್ಯ ಗಂಧವನ್ನು,  ಭಾರತೀಯತೆಯನ್ನು ಈ ಕಾಲಘಟ್ಟದಲ್ಲಿ ಉಳಿಸಿ-ಬೆಳೆಸಲು ಪತ್ರಿಕೆ ಬದ್ಧವಾಗಿದೆ.  ಸದಾಚಾರಸಂಪನ್ನತೆಯನ್ನು,  ಭಾರತೀಯವಾದ ವಿದ್ಯೆ-ಕಲೆಗಳ ವೈಭವವನ್ನು ಜನಮಾನಸಕ್ಕೆ ತಲುಪಿಸಿ ಅದರ ಸಂರಕ್ಷಣೆ-ಸಂವರ್ಧನೆಗೆ ಪತ್ರಿಕೆ ತನ್ನದೇ ಆದ ವಿಶಿಷ್ಟ ಸೇವೆಯೊಂದಿಗೆ ಮುಂದೆ ಸಾಗುತ್ತಿದೆ.  ಆಬಾಲವೃದ್ಧರ ಮನ-ಮನೆಯೊಪ್ಪುವ ಭಾರತೀಯ ಚಿಂತನೆಗಳನ್ನು ಪ್ರಕಟಿಸಿ ಸಂಸ್ಕೃತಿಸೇವೆ ಸಲ್ಲಿಸುವುದು ಪತ್ರಿಕೆಯ ಪರಮೋದ್ದೇಶ.