ಶ್ರೀಭಾರತೀ ಪ್ರಕಾಶನದ ಪ್ರಕಟಿತ ಗ್ರಂಥಗಳ ಯಾದಿ |
ಬೆಲೆ |
| 1 |
ಶಾಸ್ತ್ರ ಸಮೀಕ್ಷಾ
 |
| ಸನಾತನಮಹರ್ಷಿಗಳ ತಪೊಮೂಲವಾದ ಸಾಧನೆ-ಶೋಧನೆಗಳ ಫಲಶ್ರುತಿಯೇ ಶಾಸ್ತ್ರಗಳು. ಶಾಸನ ಹಾಗೂ ತ್ರಾಣನರೂಪವಾದ ಶಾಸ್ತ್ರವು ಜೀವಜಗತ್ತಿನ ಅಭ್ಯುದಯ ನಿಶ್ಶ್ರೇಯಸಗಳ ಮೂಲವೂ ಆಗಿದೆ. ಜನಮಾನಸದಿಂದ ದೂರಾಗುತ್ತಿರುವ ಈ ಶಾಸ್ತ್ರಗಳಲ್ಲಿರುವ ಅಪೂರ್ವ ವಿಷಯಗಳನ್ನು ಪರಿಚಯಿಸುವ ಪ್ರಯತ್ನವೇ ‘ಶಾಸ್ತ್ರಸಮೀಕ್ಷಾ’ ಗ್ರಂಥ. ಜೀವನೋಪಯೋಗಿಯಾದ ಧರ್ಮಶಾಸ್ತ್ರ, ಆಗಮ, ವಾಸ್ತು, ಶಿಲ್ಪ ಈ ಶಾಸ್ತ್ರಗಳಲ್ಲಿ ಅಡಗಿರುವ ಅಮೂಲ್ಯ ವಿಷಯಗಳನ್ನು ಲೇಖನರೂಪದಲ್ಲಿ ಸಂಕಲಿಸಲಾಗಿದೆ. ವಿವಾಹ, ಕರ್ಮವಿಭಾಗ, ಆಶೌಚ, ವ್ಯವಹಾರ, ದೇವತಾಪ್ರತಿಷ್ಠಾ, ಉಪಾಸನಾ, ತಂತ್ರ, ಉತ್ಸವ, ವಾಸ್ತು ಸೂತ್ರ, ಮಾನಸಾಧನಾ, ವೃಕ್ಷಗೃಹ ವಾಸ್ತು, ಶಿಲ್ಪಸೌಂದರ್ಯ, ದೇಹ-ದೇವಾಲಯ, ಮೂರ್ತಿಶಿಲ್ಪ ಹೀಗೆ ಅನೇಕ ವಿಷಯಗಳು ನಾಡಿನ ಶ್ರೇಷ್ಠ ವಿದ್ವಾಂಸರ ಲೇಖನಿಯಿಂದ ಮೂಡಿಬಂದಿದೆ. |
|
ರೂ. 75/- |
| 2 |
ಧರ್ಮಜ್ಯೋತಿ
 |
| ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಲೇಖನಾಮೃತ ಸಂಗ್ರಹವೆ ‘ಧರ್ಮಜ್ಯೋತಿ’. ‘ಕನ್ನಡ ಪ್ರಭ’ ದಿನಪತ್ರಿಕೆಯಲ್ಲಿ ‘ಧರ್ಮಜ್ಯೋತಿ’ ಅಂಕಣದಲ್ಲಿ ಶ್ರೀಗಳು ಹೊತ್ತಿಸಿದ ೩೬ ಚಿಂತನಾಜ್ಯೋತಿಗಳು ಈ ಗ್ರಂಥದಲ್ಲಿ ಸಂಗ್ರಹಗೊಂಡಿವೆ. ಪ್ರತಿಯೊಬ್ಬ ಜೀವಿಯೂ ಜೀವನ ಧ್ಯೇಯವನ್ನರಿಯಲು ಉಪಯುಕ್ತ ಗ್ರಂಥ. ಮೌಲಿಕ ದೃಷ್ಟಾಂತ, ಅನುಭವ ನುಡಿಗಳಿಂದ ಕೂಡಿದ ದಿವ್ಯ ಹೊತ್ತಿಗೆಯೇ ಧರ್ಮಜ್ಯೋತಿ. |
|
ರೂ. 45/- |
| 3 |
ವ್ಯಾಖ್ಯಾನ ಸಿಂಹಾಸನ
 |
| ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನ ಶ್ರೀರಾಮಚಂದ್ರಾಪುರಮಠದ ಹೆಮ್ಮೆಯ-ಶ್ರೇಷ್ಠತೆಯನ್ನು ಸಾರುವ ಭವ್ಯ, ದಿವ್ಯ ಹಸ್ತಿದಂತ ಸಿಂಹಾಸನದ ಕುರಿತಾದ ಗ್ರಂಥ. ಹಿರಿಯ ಸಾಹಿತಿ ಶ್ರೀ ಶೀರಂಕಲ್ಲು ಈಶ್ವರ ಜೋಯಿಸರ ಲೇಖನಿಯಿಂದ ಮೂಡಿಬಂದ ಈ ಗ್ರಂಥವು ಶ್ರೀಮಠದ ಯತಿಪರಂಪರೆಯ ಶ್ರೇಷ್ಠತೆಯ ದ್ಯೋತಕವಾಗಿರುವ ಈ ಹಸ್ತಿದಂತ ಸಿಂಹಾಸನದ ಹಿನ್ನೆಲೆಯಲ್ಲಿ ಅಡಗಿರುವ ರೋಚಕ ಸಂಗತಿಗಳನ್ನು ಸಂಗ್ರಹಿಸಿದ್ದಾರೆ. ಉತ್ತಮ ಚಿತ್ರಗಳನ್ನು ಒಳಗೊಂಡು ವಾಚಕರಿಗೆ ಅಚ್ಚು-ಮೆಚ್ಚೆನಿಸುವ ಕೈಪಿಡಿ. |
|
(ಲಭ್ಯವಿಲ್ಲ) |
| 4 |
ಕಾಮದುಘಾ
 |
| ಶ್ರೀಮಠದ ಸಮಾಜಮುಖೀ ಯೋಜನೆಗಳಲ್ಲಿ ಒಂದಾದ ಹೆಮ್ಮೆಯ ‘ಕಾಮದುಘಾ’ ಕುರಿತು ವಿವರಿಸುವ ಗ್ರಂಥ. ಪರಮಪವಿತ್ರ ಜೀವಿ ಗೋವಿನ ಬಹುಮುಖ ಉಪಯೋಗವನ್ನು; ಭಾರತೀಯ ಗೋವಂಶಕ್ಕಿರುವ ಹಿರಿಮೆ ಗರಿಮೆಯುಕ್ತ ಇತಿಹಾಸವನ್ನು ಸಾರುವ; ಗೋವು ಹೊಂದಿರುವ ವಿವಿಧ ಕ್ಷೇತ್ರಗಳಲ್ಲಿನ ಪಾತ್ರವನ್ನು ಪರಿಚಯಿಸುವ ಸಂಗ್ರಹವಾಗಿದೆ. ಭಾರತೀಯಗೋವಂಶವನ್ನು ಪರಿಚಯಿಸುವ ಚಿತ್ರಸಂಪುಟವು ಆಕರ್ಷಕವಾಗಿದೆ. |
|
(ಲಭ್ಯವಿಲ್ಲ) |
| 5 |
ಬೆಳಕಿನ ಪಥದಲ್ಲಿ-೧
 |
| ಶ್ರೀಶಂಕರಭಗವತ್ಪಾದರಿಂದ ಸ್ಥಾಪಿತವಾದ ಅವಿಚ್ಛಿನ್ನ ಪರಂಪರೆಯ ಶ್ರೀರಾಮಚಂದ್ರಾಪುರಮಠದ ಸ್ಥಾಪನೆ; ಅದರ ಹಿನ್ನೆಲೆ, ಆರಾಧ್ಯಮೂರ್ತಿ ಶ್ರೀಸೀತಾರಾಮಾದಿಗಳ ಐತಿಹ್ಯ, ಯತಿಪರಂಪರೆಯನ್ನು ಪರಿಚಯಿಸುವುದಲ್ಲದೇ, ಶ್ರೀಮಠವು ಹೊಂದಿರುವ ಶಾಖಾಮಠಗಳು, ದೇವಾಲಯಗಳು, ಶಿಕ್ಷಣಸಂಸ್ಥೆಗಳ ವಿವರಗಳಿವೆ. ೩೬ನೇ ಪೀಠಾಧಿಪತಿಗಳಾಗಿರುವ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಕೈಗೊಂಡ ಸಮಾಜಮುಖೀ ಕಾರ್ಯಕ್ರಮಗಳನ್ನು ಪರಿಚಯಿಸುವುದು. |
|
(ಲಭ್ಯವಿಲ್ಲ) |
| 6 |
ವಾತವ್ಯಾಧಿ
 |
| ಶರೀರವನ್ನು ಬಾಧಿಸುವ ವ್ಯಾಧಿಗಳಲ್ಲೊಂದಾದ ವಾತದ ಕುರಿತು ಸಮಗ್ರ ವಿಷಯಗಳನ್ನೊಳಗೊಂಡ ಗ್ರಂಥ. ಮೈಸೂರಿನ ಸರ್ಕಾರಿ ಭಾರತೀಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾದ ನಾಡಿನ ಹಿರಿಯ ಆಯುರ್ವೇದ ವಿಜ್ಞಾನಿ ಡಾ| ಬಿ. ಜಿ. ಗೋಪೀನಾಥರು ರಚಿಸಿರುವ ಈ ಗ್ರಂಥದಲ್ಲಿ ಪಕ್ಷಾಘಾತವನ್ನು ಆಧುನಿಕ ವೈದ್ಯಕೀಯದ ಜೊತೆಯ ತುಲನೆ, ರೋಗದ ಇತಿಹಾಸ, ರೋಗಕ್ಕೆ ಕಾರಣ, ಚಿಕಿತ್ಸೆ, ಪಥ್ಯ ಇತ್ಯಾದಿ ವಿಷಯಗಳನ್ನು ಸಂಹಿತಾದಿ ಗ್ರಂಥಗಳ ಆಧಾರದೊಂದಿಗೆ ಸಂಗ್ರಹಿಸಲಾಗಿದೆ. ಆಯುರ್ವೇದ ವೈದ್ಯ-ವಿದ್ಯಾರ್ಥಿ ಅಧ್ಯಾಯಿಗಳಿಗೆ ಅತ್ಯುಪಯುಕ್ತ ಗ್ರಂಥ. |
|
ರೂ. 125/- |
| 7 |
ಬೆಳಕಿನ ಪಥದಲ್ಲಿ-೨
 |
| ಶ್ರೀಶಂಕರಭಗವತ್ಪಾದರಿಂದ ಸ್ಥಾಪಿತವಾದ ಅವಿಚ್ಛಿನ್ನಪರಂಪರೆಯ ಶ್ರೀರಾಮಚಂದ್ರಾಪುರಮಠದ ಭವ್ಯ ಇತಿಹಾಸ, ಶಾಖಾಮಠಗಳು, ಯತಿಪರಂಪರೆಗಳನ್ನು ಪರಿಚಯಿಸುವ ಗ್ರಂಥ. ೩೬ ನೇ ಪೀಠಾಧಿಪತಿಗಳಾದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಪೀಠಾರೋಹಣ ಕೈಗೊಂಡು ಸಂಕಲ್ಪಿಸಿದ ಸಮಾಜಮುಖೀ ಕಾರ್ಯಕ್ರಮಗಳನ್ನು ಪರಿಚಯಿಸುವುದು. ಶಿಕ್ಷಣ-ಕಾಮದುಘಾ-ಅಮೃತಸತ್ತ್ವ ಇತ್ಯಾದಿ ಯೋಜನೆಗಳ ಸಚಿತ್ರ ಪರಿಚಯಗಳಿವೆ. |
|
ರೂ. 25/- |
| 8 |
ಗೋವು ಮತ್ತು ಕೃಷಿ
 |
| ಭಾರತೀಯ ಜೀವನವ್ಯವಸ್ಥೆ ಕೃಷಿ ಪ್ರಧಾನವಾದುದು. ಅದು ಗೋವಿನಿಂದ ಮಾತ್ರ ಪರಿಪೂರ್ಣ. ಗೋವು-ಕೃಷಿ-ಭಾರತೀಯರ ಜೀವನದಲ್ಲಿ ಹೊಂದಿರುವ ಬಾಂದವ್ಯದ ಈ ಕಾಲ ಘಟ್ಟದಲ್ಲಿ ಶಿಥಿಲಗೊಳ್ಳುತ್ತಿದೆ. ಫಲಾನುಭವಿಗಳನ್ನು ಸತ್ತ್ವಪೂರ್ಣಗೊಳಿಸಲು ಗೋಆಧಾರಿತ ಕೃಷಿಪದ್ಡತಿಯ ಅವಲಂಬನೆ ಅನಿವಾರ್ಯ. ಕೃಷಿಗೂ ಹಾಗೂ ಗೋವಿಗೂ ಇರುವ ಸಂಬಂಧ ಮತ್ತು ಸಾಫಲ್ಯವನ್ನು ಸಾರುವ; ಗೋವಿನಿಂದ ಕೃಷಿಕ್ಷೇತ್ರ ಪೂರ್ಣತೆ ಪಡೆಯುವಲ್ಲಿನ ಎಲ್ಲ ವಿಷಯಗಳನ್ನು ಸಾರುವ ಉತ್ತಮ ಗ್ರಂಥ. |
|
ರೂ. 15/- |
| 9 |
ಗೋಗೀತಾ
 |
| ಗೋವು ಮಾನವನ ಸಮಸ್ತ ಕ್ಷೇತ್ರಗಳ ಪರಮಾಪ್ತ ಸಂಗಾತಿ. ಮನುಕುಲ ಜೀವನವನ್ನು ಸಂಪದ್ಬರಿತಗೊಳಿಸುವ ಗೋವಿನ ಕುರಿತಾಗಿ ಭಾರತೀಯವಾದ ಎಲ್ಲ ಸಾಹಿತ್ಯಪ್ರಕಾರಗಳೂ ಗೌರವವನ್ನು ಸಲ್ಲಿಸಿವೆ. ‘ಪುಣ್ಯಕೋಟಿ’ಯೆಂದು ಕನ್ನಡ ಜನಪದ ಸಾಹಿತ್ಯ ಕರೆದು ಅದರ ಸತ್ಯತೆಯ ಬಗ್ಗೆ ‘ಪುಣ್ಯಕೋಟಿ ಕಥೆ’ ಎಂಬ ಪದಪುಂಜವನ್ನೇ ಜನಮಾನಸದಲ್ಲಿ ಚಿರಸ್ಥಾಯಿಗೊಳಿಸಿದೆ. ಹಿಗೆ ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠವೆಂದು ಹೇಳಲ್ಪಡುವ ಕಾವ್ಯಮಯವಾದ ೨೩೨ ಪದ್ಯಗಳಿಂದ ಸಂಗ್ರಹಗೊಂಡ ‘ಪುಣ್ಯಕೋಟಿಕಥೆ’ ಮತ್ತು ಗೋವಿನ ಕುರಿತಾದ ಬೇರೆ ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ. ಗೋಸಾಹಿತ್ಯಾಸಕ್ತರ ಮನಸೂರೆಗೊಳ್ಳುವ ದಿವ್ಯ ಸಂಕಲನ. |
|
ರೂ. 20/-
|
| 10 |
ಗೋಪ್ರಪಂಚ
| ಲೇ: ಶ್ರೀ ಹನಿಯ ರವಿ |
 |
| ಭಗವಂತನ ಸೃಷ್ಟಿಯಲ್ಲಿ ಗೋವು ಅನ್ಯತಮ ಜೀವಿ. ಮಾತೆಯೆಂದು ಪೂಜಿಸಲ್ಪಡುವ ಗೋವು ಮನುಕುಲದ ಸಕಲಕಾಮನೆಗಳನ್ನು ಈಡೇರಿಸುವುದರಿಂದ ಕಾಮಧೇನು ಎನಿಸಿದೆ. ಇಂತಹ ಪವಿತ್ರವಾದ ಗೋವಂಶ ಮಾನವನ ಸ್ವಾರ್ಥಕ್ಕೆ ಬಲಿಯಾಗುತ್ತಿದೆ. ಭಾರತೀಯ ಗೋವಿನ ಹಿಂದಿರುವ ಪೌರಾಣಿಕ ವೈಭವ, ಇತಿಹಾಸವೈಭವ, ಗೋವಿನ ಉಪಯುಕ್ತತೆ, ಗೋವಿನಕೊಡುಗೆ, ಕೃಷಿಯಲ್ಲಿ ಗೋವಿನ ಪಾತ್ರ ಮುಂತಾದ ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಿ ‘ಗೋಪ್ರಪಂಚ’ ಎಂಬ ಶೀರ್ಷಿಕೆಯಡಿಯಲ್ಲಿ ಲೋಕಾರ್ಪಣಗೊಳಿಸಲಾಗಿದೆ. ಗೋವಿನ ಮಹಿಮೆಯರಿಯುವ ಸಹೃದಯರಿಗೆ ‘ಗೋಪ್ರಪಂಚ’ ಒಂದು ಉತ್ತಮ ಗ್ರಂಥ. |
|
ರೂ. 20/- |
| 11 |
ಜಗನ್ಮಾತೆ ಗೋವು
| ಲೇ: ಶ್ರೀ ಸದಾಶಿವ ಮೋಂತಿಮಾರು, ಡಾ| ದಿನೇಶ ಸರಳಾಯ, ಡಾ| ರವಿ |
 |
| ಗೋವು ಚಲಿಸುವ ದೇವಾಲಯ, ಚಲಿಸುವ ಔಷಧಾಲಯ. ಇದು ಭಾರತೀಯ ಜೀವನವ್ಯವಸ್ಥೆಯ ಅನುಭವ ಸತ್ಯ ಸಂಗತಿ. ಗೋವು ಹೊಂದಿರುವ ಸಮಗ್ರಕ್ಷೇತ್ರಗಳ ವಿವೇಚನೆ ಈ ಗ್ರಂಥದಲ್ಲಿದೆ. ಭಾರತೀಯ ಗೋತಳಿಗಳ ಪೂರ್ಣ ಪರಿಚಯ, ಗವ್ಯೋತ್ಪನ್ನಗಳಾದ ಹಾಲು, ಮೊಸರು, ತುಪ್ಪದ ಬಗ್ಗೆ ಆಯುರ್ವೇದ ಶಾಸ್ತ್ರಗಳಲ್ಲಿ ಹೇಳಲ್ಪಟ್ಟ ಮಾಹಿತಿಗಳು ಸಂಕಲಿತಗೊಂಡಿವೆ. ಗೋರಕ್ಷಣೆಗೆ ಕಟಿಬದ್ಧರಾದ ಸಾಧಕರ ಆಂದೋಲನದ ವಿಷಯಗಳು ಗೋವಿನಲ್ಲಿರುವ ದೈವಿಕ, ವೈದ್ಯಕೀಯ ಸಂಗತಿಗಳನ್ನು ಪ್ರಕಾಶಗೊಳಿಸಲಾಗಿದೆ. ವಿದೇಶೀತಳಿಗಳೊಂದಿಗಿನ ತುಲನಾತ್ಮಕ ಮಾಹಿತಿಯೊಂದಿಗೆ ಭಾರತೀಯ ಗೋವಂಶದ ಮಹತ್ತ್ವವನ್ನು ಸಂಗ್ರಹಿಸಿ ‘ಜಗನ್ಮಾತೆ ಗೋವು’ ಎಂಬ ಸಮಗ್ರ ವಿಷಯಗಳ ಈ ಕೃತಿ ರಚಿತವಾಗಿದೆ. |
|
ರೂ. 45/- |
| 12 |
ಗೋ ಆಧಾರಿತ ಅಭಿವೃದ್ಧಿ
| ಲೇ: ಪ್ರೊ. ಬಿ. ಎಂ. ಕುಮಾರಸ್ವಾಮಿ |
 |
| ಭಾರತೀಯರ ಜೀವನ ಗೊವಿನಿಂದ ಸಮೃದ್ಧಗೊಂಡಿದೆ. ಜೀವನದ ಎಲ್ಲ ಕ್ಷೇತ್ರಗಳಲ್ಲೂ ಗೋವಿನ ನೆರವಿದೆ. ಗೋವು ಮನುಕುಲದ ಅಭ್ಯುದಯ-ನಿಶ್ಶ್ರೇಯಸ್ಸಿನ ಮೂಲವೂ ಹೌದು. ಗೋ ಆಧಾರಿತ ಕೃಷಿಪದ್ಧತಿಯಿಂದ ದೇಶದ ಅಭಿವೃದ್ಧಿ ಸಾಧಿಸಿದ ಭಾರತದಲ್ಲಿ, ಇಂದು ಆಧುನಿಕತೆಯ ಹೆಸರಿನಲ್ಲಿ ರೈತನ ಆರೋಗ್ಯ ಹಿಂಡುವ ಕೃಷಿಪದ್ಧತಿ ಜಾರಿಯಾಗುತ್ತಿದೆ. ಪ್ರಕೃತ ಗ್ರಂಥದಲ್ಲಿ ಗೋವಿನಿಂದ ಕೃಷಿಕ್ಷೇತ್ರ ಹೇಗೆ ಸಮೃದ್ಧ ಎಂಬುದನ್ನು ಅಂಕಿ-ಅಂಶಗಳ ಮೂಲಕ ಸಾರಲಾಗಿದೆ. ಅರ್ಥಶಾಸ್ತ್ರಜ್ಞರಾದ ಲೇಖಕರು ಗೋವಿನಿಂದಾಗುವ ಸಂಪರ್ಕ-ಸಾರಿಗೆ, ಕೃಷಿ ಹೀಗೆ ಹಲವಾರು ಕ್ಷೇತ್ರಗಳಲ್ಲಿನ ಸಾಧನೆಯನ್ನು ವೈಜ್ಞಾನಿಕವಾಗಿ ಸರಕಾರಿ ಇಲಾಖೆಯ ಅಂಕಿ-ಅಂಶಗಳ ಮಾಹಿತಿಯೊಂದಿಗೆ ಪ್ರಸ್ತುತಪಡಿಸಿದ್ದಾರೆ. |
|
ರೂ. 10/- |
| 13 |
ಸಂಕ್ಷೇಪರಾಮಾಯಣ
| ಅನುವಾದ: ವಿದ್ವಾನ್. ಎನ್. ರಂಗನಾಥಶರ್ಮಾ |
 |
| ದರ್ಶನಕವಿ, ಆದಿಕವಿ ವಾಲ್ಮೀಕಿಯಿಂದ ರಚಿತವಾದ ಆದಿಕಾವ್ಯ ರಾಮಾಯಣ. ದಿವಿಯಿಂದ ಭುವಿಗವತರಿಸಿದ ಭಗವಂತ ಶ್ರೀರಾಮನ ಧೀರ-ಗಂಭೀರ ಹೆಜ್ಜೆಗಳೇ ರಾಮಾಯಣ. ಈ ಕಾವ್ಯ ವೇದಸಮಾನ. ಇದು ಆದರ್ಶ ಮೌಲ್ಯಗಳ ಮಹೋದಧಿ. ಇಂತಹ ಪವಿತ್ರಗ್ರಂಥದ ಅಧ್ಯಯನ ಭಾರತೀಯರ ಕರ್ತವ್ಯ. ರಾಮಾಯಣದ ಬಾಲಕಾಂಡದ ಮೊದಲ ಸರ್ಗವೇ ‘ಸಂಕ್ಷೇಪರಾಮಾಯಣ’. ಸಂಪೂರ್ಣರಾಮಾಯಣವನ್ನು ಸಂಕ್ಷೇಪಗೊಳಿಸಲಾದ ಈ ಸರ್ಗ ಪಠಣ ಯೋಗ್ಯವಾದುದು. ಮಹಾಮಹೋಪಾಧ್ಯಾಯ ವಿದ್ವಾನ್ ಎನ್. ರಂಗನಾಥಶರ್ಮಾರವರು ಸುಂದರವಾಗಿ ಕನ್ನಡೀಕರಿಸಿದ್ದಾರೆ. ಶ್ರೀಶ್ರೀಗಳವರ ಆಶೀರ್ಮಂಗಲ ನುಡಿಯಿಂದ ಮೆರಗುಗೊಂಡ ಈ ಗ್ರಂಥದ ಕೊನೆಯಲ್ಲಿ ಭಜನರಾಮಾಯಣವನ್ನು ಸೇರಿಸಲಾಗಿದೆ. ಅರ್ಥಸಹಿತವಾಗಿ ಸಂಕ್ಷೇಪರಾಮಾಯಣವನ್ನು ಪಠಿಸುವ ಪಾಠಕರಿಗೆ ಉಪಯುಕ್ತವಾದ ಕೃತಿಯಾಗಿದೆ. |
|
ರೂ. 20/- |
| 14 |
ಉಪಾಸನಾದಿನಚರಿ
| |
 |
| ಸೃಷ್ಟಿಯ ಮೂಲ ಭಗವಂತ. ಸೃಷ್ಟಿಯ ಚಕ್ರಕ್ಕೊಳಪಟ್ಟ ಜೀವಿ ತನ್ನ ಮೂಲವನ್ನು ಹೊಂದಲು ಅನುಕೂಲವಾದ ಜೀವನವಿಧಾನವನ್ನು ಇಟ್ಟುಕೊಳ್ಳಬೇಕು. ಭಾರತೀಯವಾದ ಜೀವನಚರ್ಯೆ ಭಗವನ್ಮೂಲವನ್ನು ತಲುಪಿಸುವುದಾಗಿದೆ. ಜೀವನವನ್ನು ಹಸಿರಾಗಿಸುವ ಅಸಂಖ್ಯ ಆಚರಣೆಗಳನ್ನು ನಮ್ಮ ಮಹರ್ಷಿಗಳು ಕೊಡಮಾಡಿ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಕಾಲಚಕ್ರದಲ್ಲಿ ಮರೆಯಾಗುತ್ತಿರುವ ಈ ಸದಾಚರಣೆಯ ಪರಂಪರೆಯನ್ನು ಉಳಿಸಿ-ಬೆಳೆಸುವುದಕ್ಕಾಗಿ ಪ್ರಕೃತ ಗ್ರಂಥದಲ್ಲಿ ಸದಾಚರಣೆಗಳನ್ನು ಸಂಕ್ಷೇಪವಿವರಣೆಯೊಂದಿಗೆ ಸಂಕಲಿತಗೊಳಿಸಲಾಗಿದೆ. ಉತ್ಥಾನದಿಂದಾರಂಭಿಸಿ ಪೂಜೆ, ಭೋಜನ, ಅಧ್ಯಯನ, ಶಯನಗಳನ್ನೊಳಗೊಂಡಂತೆ ನಿತ್ಯ ಜೀವನದ ಪ್ರತಿಹಂತದ ಸದಾಚರಣೆಗಳನ್ನು ಸಂಗ್ರಹಿಸಲಾಗಿದೆ. ಸದಾಚಾರಸಂಪನ್ನತೆಯನ್ನಪೇಕ್ಷಿಸುವ ಎಲ್ಲರ ಮನೆಯಲ್ಲಿರಬೇಕಾದ ಉಪಯುಕ್ತ ಕೈಪಿಡಿ. |
|
ರೂ. 15/- |
| 15 |
ಅಭಿಜ್ಞಾನ
| |
 |
| ಶ್ರೀಶಂಕರಭಗವತ್ಪಾದರಿಂದ ಸ್ಥಾಪಿತವಾದ ಅವಿಚ್ಛಿನ್ನಪರಂಪರೆಯ ಶ್ರೀರಾಮಚಂದ್ರಾಪುರಮಠವು ಹೊಂದಿರುವ ತನ್ನ ಭವ್ಯದಿವ್ಯ ಇತಿಹಾಸವನ್ನು ನೆನಪಿಸುವ ಅಪೂರ್ವ ಗ್ರಂಥ. ೩೫ನೇ ಪೀಠಾಧಿಪತಿಗಳಾಗಿದ್ದ ಬ್ರಹ್ಮಲೀನ ಶ್ರೀಶ್ರೀ ರಾಘವೇಂದ್ರ ಭಾರತೀಮಹಾಸ್ವಮಿಗಳವರ ಸಾಧನೆಯನ್ನು ಸಂಕಲಿಸಲಾಗಿದೆ. ಪ್ರಕೃತ ೩೬ನೆ ಪೀಠಾಧಿಪತಿಗಳಾದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ಈವರೆಗಿನ ಸಾಧನೆ-ಶೋಧನೆಗಳ ಸಮಗ್ರ ಸಂಗತಿಗಳು ನಿರೂಪಿತವಾಗಿವೆ. ಶ್ರೀಗಳವರ ೧೨ ವರ್ಷಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ ಜರುಗಿದ ಸಭೆ-ಸಮಾರಂಭಗಳ ಸಮಗ್ರ ಪರಿಚಯಗಳಿವೆ. ಶ್ರೀಗಳವರ ಸಮಾಜಮುಖೀ ಕಾರ್ಯಗಳ ಚಿತ್ರಣವಿದೆ. |
|
ರೂ. 25/- |
| 16 |
ಬಿಂದು ರಾಮಾಯಣ
| ಲೇ: ಶ್ರೀ ಅಕ್ಷಯ ರಾಮ ಕೆ. |
 |
| ವಾಲ್ಮೀಕಿ ಮಹರ್ಷಿಗಳಿಂದ ರಚಿತವಾದ ರಾಮಾಯಣ ಆದರ್ಶಗಳ ಮಹಾಕಾವ್ಯ. ವೇದಸಮಾನ ಎಂದು ಪ್ರಶಂಸಿತವಾದ ಈ ಕಾವ್ಯ ವಿಶ್ವದ ಎಲ್ಲ ಭಾಷೆಗೂ ಭಾಷಾಂತರಗೊಂಡಿದೆ. ಕವಿಗಳು ತಮ್ಮ ಭಾವ-ಭಾಷೆಗಳ ರಸಪಾಕಗೊಳಿಸಿ ರಾಮಾಯಣಕ್ಕೆ ನವನವೀನ ಸ್ವರೂಪ ನೀಡಿದ್ದಾರೆ. ಪ್ರಕೃತ ಲೇಖಕರು ಕನ್ನಡ ಭಾಷೆಯಲ್ಲಿ ಸುಲಲಿತ ಹಾಗೂ ಸುಂದರ ಶೈಲಿಯಲ್ಲಿ ಕಾವ್ಯವನ್ನು ರಚಿಸಿದ್ದಾರೆ. ಪಠಿಸಲು ಮುದನೀಡುವ ಈ ಕೃತಿ ಚಿಕ್ಕದಾದರೂ ಹಿರಿದಾದ ವಿಷಯ ಹೊಂದಿದೆ. |
|
ರೂ. 20/- |
| 17 |
ನೃತ್ಯರಸೋದಯ
| ಲೇ: ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ |
 |
| ಭಾರತೀಯ ವಿದ್ಯೆ-ಕಲೆಗಳು ಭಗವನ್ಮೂಲದಿಂದ ವಿಕಾಸವಾಗಿದೆ. ಈ ಕಲಾಪ್ರಕಾರದಲ್ಲಿ ಭರತನೃತ್ಯವೂ ಒಂದು. ಚತುರ್ವೇದದ ಅಂಶಗಳಿಂದ ಪ್ರಕಾಶಿತವಾದ ಈ ಕಲೆಗೆ ಭರತಮುನಿಯೇ ದ್ರಷ್ಟಾರ. ಈ ಕಲೆಯನ್ನು ಜೀವನದಲ್ಲಿ ತಪಸ್ಸನ್ನಾಗಿಸಿಕೊಂಡು ಶೋಧನೆ-ಸಾಧನೆ ಮಾಡಿದ ಡಾ. ಪದ್ಮಾಸುಬ್ರಹ್ಮಣ್ಯಂರವರ ನೃತ್ಯ ಪ್ರಕಾರಗಳನ್ನು, ಅವುಗಳ ಹಿಂದಿರುವ ಸಾಧನಾ ಸಂಗತಿಗಳನ್ನು ವಿವರಿಸಲಾಗಿದೆ. ನವರಸನಾಯಕಿಯ ವಿವಿಧ ಭಂಗಿಗಳ, ಮುಖಮುದ್ರೆಗಳ ವರ್ಣಚಿತ್ರಗಳು ಗ್ರಂಥದ ಮೌಲಿಕತೆಯನ್ನು ಹೆಚ್ಚಿಸಿವೆ. ನೃತ್ಯಾಸಕ್ತರಿಗೆ ಅಪೂರ್ವವಾದ ಕೈಪಿಡಿಯಾಗಿದೆ. |
|
ರೂ. 40/- |
| 18 |
ಶರಾವತಿ ಕಣಿವೆ ಅವಲೋಕನ
| |
 |
| ಶ್ರೀರಾಮನ ಶರದಿಂದ ಉದಿಸಿ ಜೀವನದಿಯಾಗಿ ಪ್ರವಹಿಸಿ ಜನರ ಜೀವನವನ್ನು; ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಪವಿತ್ರ ನದಿ ಶರಾವತಿ. ಕಾಲವೈಪರೀತ್ಯದಿಂದ ಇಂದು ನದಿ ಕಣಿವೆಯ ಜೀವವೈವಿಧ್ಯಗಳಲ್ಲಿ ಹಾಗೂ ಪರಿಸರದಲ್ಲಿ ವಿಕಾರವಾಗಿ ಕಣಿವೆಯ ಜನರ ಜೀವನ ದುರಂತಮಯವಾಗಿದೆ. ಈ ಹಿನ್ನೆಲೆಯಲ್ಲಿ ನದಿಯ ಉಗಮದಿಂದಾರಂಭಿಸಿ ಸಮುದ್ರ ಸಂಗಮಪರ್ಯಂತ ಪರಿಸರಪ್ರೇಮಿಗಳ ತಂಡವೊಂದು ಸಮೀಕ್ಷೆ ನಡೆಸಿತು. ಪರಿಸರ ಹಾಗೂ ಜೀವವೈವಿಧ್ಯಗಳ ಸ್ಥಿತಿ-ಗತಿಗಳ ಅಧ್ಯಯನ ನಡೆಸಿ ವರದಿಯೊಂದನ್ನು ಸಿದ್ಧಪಡಿಸಿದೆ. ಈ ಅಧ್ಯಯನಗಳ ಸಂಗ್ರಹರೂಪವೇ ‘ಶರಾವತಿ ಕಣಿವೆ ಅವಲೋಕನ’ ಗ್ರಂಥ. ಪರಿಸರಾಸಕ್ತರಿಗೆ, ಮಲೆನಾಡಿನ ಪ್ರದೇಶದ ಅಧ್ಯಯನಾಸಕ್ತರಿಗೆ ಉಪಯುಕ್ತವಾದುದಾಗಿದೆ. |
|
ರೂ. 50/- |
| 19 |
ಮಂಗಲಮೂರ್ತಿ ಗೋಮಾತೆ
| ಲೇ: ಶ್ರೀ ಸದಾಶಿವಮೋಂತಿಮಾರು |
 |
| ಭಾರತೀಯ ಗೋವು ಬಹಳ ಕಾಲದಿಂದಲೂ ಸಮಾಜದ ಎಲ್ಲ ಮುಖಗಳಲ್ಲಿಯೂ ಉಪಯೋಗಿಯಾಗಿ ಬೆಳೆದು ಬಂದಿದೆ. ವೈಜ್ಞಾನಿಕತೆ ಬೆಳೆದಂತೆ, ಆಸೆ ಹೆಚ್ಚಿದಂತೆ ಗೋವಿನ ಅವಲಂಬನೆ ದೂರವಾಗಿ ಬದುಕು ಬರಡಾಗುತ್ತಿದೆ. ಮನುಕುಲದ ಉಳಿವು ಗೋವಿನಲ್ಲಿದೆ ಎಂಬುದನ್ನು ಅರಿಯಲು ಈ ಕೃತಿ ಉಪಯುಕ್ತವಾಗಿದೆ. ಗೋವಿನ ಮಹತ್ತ್ವ, ಗೋಸೇವೆಯ ಮಹತ್ತ್ವ, ಗವ್ಯೋತ್ಪನ್ನಗಳ ಉಪಯೋಗ ಹೀಗೆ ಗೋವಿನ ವಿಶ್ವರೂಪ ದರ್ಶನವನ್ನೇ ಮಾಡಿಸುವಂತೆ ಈ ಕೃತಿ ಮೂಡಿ ಬಂದಿದೆ. ಹಿಂದಿ, ಆಂಗ್ಲಭಾಷೆಯ ಸಾಹಿತ್ಯಗಳ ನೆರವನ್ನು ಪಡೆದು ರಚಿತವಾದ ಈ ಗ್ರಂಥ ಎಲ್ಲರ ಮನೆಯಲ್ಲಿರಬೇಕಾದ ಎಲ್ಲರಿಂದ ಮನನೀಯ ಯೊಗ್ಯವಾದುದಾಗಿದೆ. |
|
ರೂ. 20/- |
| 20 |
THE AMRITHAMAHAL THE WARRIOR OF THE CATTLE (ಆಂಗ್ಲ)
| ಲೇ: ಡಾ| ಕೆ. ಪಿ. ರಮೇಶ್ |
 |
| ಭಾರತೀಯ ಗೋವಂಶವು ಜಗತ್ತಿನಲ್ಲೇ ವಿಶಿಷ್ಟತೆ ಹೊಂದಿದೆ. ಪ್ರತಿಯೊಂದು ತಳಿಯೂ ತನ್ನ ವಿಶಿಷ್ಟತೆಯನ್ನು ಸಾದರಪಡಿಸುತ್ತದೆ. ‘ಅಮೃತ ಮಹಲ್’ ಎಂದು ಕರೆಯಲ್ಪಡುವ ಮೈಸೂರಿನ ತಳಿ ಮೈಸೂರಿನ ಮಹಾರಾಜರು ಅಭಿವೃದ್ಧಿ ಪಡಿಸಿದ ಉತ್ತಮ ಕೆಲಸಗಾರ ತಳಿ. ಮೊಘಲ ಸೈನಿಕರನ್ನು ದೂರಕ್ಕಟ್ಟಿದ ಶ್ರೇಯಸ್ಸು ಈ ತಳಿಗಿದೆ. ಇಂತಹ ಶ್ರೇಷ್ಠ ತಳಿಯ ಸಮಗ್ರ ವಿಷ೦ಯಗಳನ್ನು ಹಿರಿಯ ಪಶುವಿಜ್ಞಾನಿ ಡಾ| ಕೆ. ಪಿ ರಮೇಶ್ರವರು ಆಂಗ್ಲಭಾಷೆಯಲ್ಲಿ ಸುಂದರವಾಗಿ ಸಂಗ್ರಹಿಸಿ ಈ ಕೃತಿ ರಚಿಸಿದ್ದಾರೆ. ಅಧ್ಯಯನಾಪೇಕ್ಷಿಗಳಿಗೆ ಉಪಯುಕ್ತ ಮಾಹಿತಿ ಒದಗಿಸುವ ಅಪೂರ್ವ ಕೃತಿ ಇದಾಗಿದೆ. |
|
ರೂ. 100/- |
| 21 |
ಶ್ರೀರಾಮಾಯಣ ಕಲ್ಪವಲ್ಲೀ
| ಲೇ: ವಿದ್ವಾನ್ ರಾಮಕೃಷ್ಣ ಅಡ್ಕೋಳಿ |
 |
| ‘ರಾಮಾಯಣ ಆದರ್ಶಗಳ ಕಾವ್ಯ. ಶ್ರೀರಾಮ ಭಗವಂತನ ಅವತಾರ. ಅವತಾರಪುರುಷ ಶ್ರೀರಾಮನ ಆರಾಧನೆಯೊಂದಿಗೆ ಜೀವಜಗತ್ತಿನ ಸಮುದ್ಧರಣಕಾರ್ಯ ಕೈಗೊಳ್ಳುತ್ತಿರುವ ಅವಿಚ್ಛಿನ್ನಪರಂಪರೆಯ ಶ್ರೀಮಠದ ಯತಿಪರಂಪರೆಗೆ ವಿಶೇಷತೆ ಸಮಾಜದಲ್ಲಿ ಇದೆ. ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಈವರೆಗಿನ ಸಾಧನೆ-ಶೋಧನೆಗಳನ್ನು ಗ್ರಂಥದಲ್ಲಿ ಮೊದಲಾಗಿ “ಶ್ರದ್ಧಾಸುಮ” ಎಂಬ ವಿಭಾಗದಲ್ಲಿ ಸಂಕಲಿಸಲಾಗಿದೆ. ಶ್ರೀರಾಮನ ಕುರಿತಾದ ಸಂಕ್ಷೇಪರಾಮಾಯಣ, ಗಾಯತ್ರೀರಾಮಾಯಣ, ಆದಿತ್ಯಹೃದಯ, ರಾಮರಕ್ಷಾಸ್ತೋತ್ರ, ಭಜನರಾಮಾಯಣ ಮುಂತಾದ ಸ್ತೋತ್ರಗಳನ್ನು ‘ಭಕ್ತಿಸುಮ’ ಎಂಬ ವಿಭಾಗದಲ್ಲೂ, ತಾರಕಬ್ರಹ್ಮಮಂತ್ರವೆಂದು ಕರೆಯುವ ರಾಮತಾರಕ ಮಂತ್ರದ ಜೊತೆ ಅನುಷ್ಠಾನಯೋಗ್ಯ ರಾಮಮಂತ್ರಗಳನ್ನು ಹಾಗೂ ಉಪಯುಕ್ತ ವಿಷಯಗಳನ್ನೊಳಗೊಂಡ “ಮುಕ್ತಿಸುಮ” ಮೂರನೆಯದಾಗಿದೆ. ಹಿರಿಯ ವಿದ್ವಾಂಸ ಶ್ರೀರಾಮಕೃಷ್ಣ ಅಡ್ಕೋಳಿಯವರ ಲೇಖನಿಯಲ್ಲಿ ಮೂಡಿದ ಈ ಕೃತಿ ಶ್ರೀಶ್ರೀಗಳ ಹಾಗೂ ಶ್ರೀರಾಮನ ಕುರಿತಾದ ಮನನೀಯ ವಿಷಯಸಂಗ್ರಹದ ಉಪಯುಕ್ತ ಕೃತಿ. |
|
ರೂ. 45/- |
| 22 |
ತಾರಕ ಚಾತುರ್ಮಾಸ್ಯ ಸ್ಮೃತಿ ಗ್ರಂಥ
| |
 |
| ಚಾತುರ್ಮಾಸ್ಯವ್ರತ ಸಂನ್ಯಾಸಿಗಳಿಗೆ ಶ್ರೇಷ್ಠವಾದ ಸಮಯ. ಹಂಸವು ಮಾನಸಸರೋವರದಲ್ಲಿ ನೆಲೆನಿಲ್ಲುವಂತೆ ಇಂದ್ರಿಯಗಳನ್ನು, ಮನಸ್ಸನ್ನು ಆತ್ಮಸೂರ್ಯನಲ್ಲಿ ನೆಲೆನಿಲ್ಲಿಸಿ; ತಪಸ್ಸನ್ನಾಚರಿಸಿ ಲೋಕವನ್ನು ಅನುಗ್ರಹಿಸುವ ಮಂಗಲಸಮಯ. ಪ್ರಕೃತ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ತಮ್ಮ ತಾರಕ ಚಾತುರ್ಮಾಸ್ಯವ್ರತಾಚರಣೆ ಕೈಗೊಂಡ ಸಂದರ್ಭದಲ್ಲಿ ಸಂಪನ್ನಗೊಂಡ ಸಭೆ-ಸಮಾರಂಭಗಳ ಸಮಗ್ರ-ಮಾಹಿತಿಯೊಂದಿಗೆ ಗ್ರಥಿತವಾದ ಕೃತಿಯೇ “ತಾರಕಚಾತುರ್ಮಾಸ್ಯಸ್ಮೃತಿಗ್ರಂಥ”. ಸದಾ ಸಮಾಜಮುಖೀ ಕಾರ್ಯಕ್ರಮಗಳೊಂದಿಗೆ ಸಮಾಜಸೇವೆಯಲ್ಲಿ ನಿರತರಾಗಿರುವ ಶ್ರೀಶ್ರೀಗಳ ಚಾತುರ್ಮಾಸ್ಯವ್ರತದ ಪ್ರತಿದಿನದ ದಿನಚರಿಗಳು ಇಲ್ಲಿ ದಾಖಲಾಗಿವೆ. ಶ್ರೀಶ್ರೀಗಳ ಮಂಗಲಾಶೀರ್ವಾದಗಳೊಂದಿಗೆ ಪುಷ್ಪಿತವಾದ ಈ ಗ್ರಂಥಕುಸುಮ ಸಂಗ್ರಹಯೊಗ್ಯವಾದುದು. |
|
ರೂ. 25/- |
ಆಡಿಯೋ ಕ್ಯಾಸೆಟ್: |
ಬೆಲೆ |
| 1 |
ಸಂಕ್ಷೇಪರಾಮಾಯಣ
| |
 |
| ಮಹರ್ಷಿ ವಾಲ್ಮೀಕಿಗಳ ಹೃದ೦iಭೂಮಿಯಲ್ಲುದಿಸಿದ ಅಮೃತಕಾವ್ಯ ರಾಮಾಯಣ. ಬದುಕಿನ ಅಭ್ಯುದಯ-ನಿಶ್ಶ್ರೇಯಸಗಳಿಗೆ ಕಾರಣವಾದ ಈ ರಾಮಾಯಣ ಬಹುಜನಮಾನ್ಯ. ಶ್ರೀಮದ್ವಾಲ್ಮೀಕಿರಾಮಾಯಣದ ಬಾಲಕಾಂಡದ ಮೊದಲ ಸರ್ಗವೇ ಸಂಕ್ಷೇಪರಾಮಾಯಣ. ವಿದ್ಯಾ-ಗುಣ-ಸಂಪತ್ತು ಮೊದಲಾದ ಫಲಪ್ರಾಪ್ತಿಯ ಮೂಲಮಂತ್ರವೆನಿಸಿದ ಇದರ ಪಾರಾಯಣ-ಅಭ್ಯಾಸಕ್ಕೆ ಅನುಕೂಲವಾಗುಂತೆ ಸಂಯೋಜಿಸಲಾಗಿದೆ. ಶ್ಲೋಕಗಳನ್ನು ಕೇಳಿ ಕಂಠಗತಗೊಳಿಸಿಕೊಳ್ಳಲು ಅನುಕೂಲವಿದೆ. |
|
ರೂ. 30/- |
| 2 |
ಮಂಗಳದ ಮುಂಬೆಳಗು
| |
 |
| ‘ಮಂಗಲಸುಪ್ರಭಾತ’ ಭಾರತೀಯವಾದ ಸದಾಚಾರ ಸಮುದ್ರದ ಶ್ರೇಷ್ಠರತ್ನ. ಭಗವನ್ಮಯವಾದ ಬಾಳಾಟವನ್ನು ಮಾಡುವ ಭಕ್ತ ದೇವನನ್ನು ಪ್ರಾತರ್ಮಂಗಲಸ್ಮರಣೆಯೊಂದಿಗೆ ಉತ್ಥಾನಗೊಳಿಸುವ ಸದಾಚಾರ ಭಾರತೀಯತೆಯ ಪ್ರತೀಕ. ಪ್ರಕೃತ ಶ್ರೀರಾಮನ ಲೀಲಾವೈಭವದ ಸುಂದರ ಸಾಹಿತ್ಯದೊಡನೆ ಸುಪ್ರಭಾತವನ್ನು ಶತಾವಧಾನಿ ಡಾ| ಗಣೇಶ್ರವರು ರಚಿಸಿದ್ದಾರೆ. ಶ್ರಿಶ್ರೀಗಳವರ ದಿವ್ಯಾಶೀರ್ವಾದ ಪ್ರಥಮ ಮಂಗಲಶ್ಲೋಕಾನುಗ್ರಹದೊಂದಿಗೆ ಗಾಯಕ ಶ್ರೀ ರಘುನಂದನ ಬೇರ್ಕಡವು ಅವರ ಕಂಠಸಿರಿಯಲ್ಲರಳಿದ ಗಾನ ಪುಷ್ಪವಿದಾಗಿದೆ. |
|
ರೂ. 50/- |
ಆಡಿಯೋ ಸಿ. ಡಿ |
|
| 1 |
ಸಂಕ್ಷೇಪ ರಾಮಾಯಣ
| |
 |
| ಮಹರ್ಷಿ ವಾಲ್ಮೀಕಿಗಳ ಹೃದ೦iಭೂಮಿಯಲ್ಲುದಿಸಿದ ಅಮೃತಕಾವ್ಯ ರಾಮಾಯಣ. ಬದುಕಿನ ಅಭ್ಯುದಯ-ನಿಶ್ಶ್ರೇಯಸಗಳಿಗೆ ಕಾರಣವಾದ ಈ ರಾಮಾಯಣ ಬಹುಜನಮಾನ್ಯ. ಶ್ರೀಮದ್ವಾಲ್ಮೀಕಿರಾಮಾಯಣದ ಬಾಲಕಾಂಡದ ಮೊದಲ ಸರ್ಗವೇ ಸಂಕ್ಷೇಪರಾಮಾಯಣ. ವಿದ್ಯಾ-ಗುಣ-ಸಂಪತ್ತು ಮೊದಲಾದ ಫಲಪ್ರಾಪ್ತಿಯ ಮೂಲಮಂತ್ರವೆನಿಸಿದ ಇದರ ಪಾರಾಯಣ-ಅಭ್ಯಾಸಕ್ಕೆ ಅನುಕೂಲವಾಗುಂತೆ ಸಂಯೋಜಿಸಲಾಗಿದೆ. ಶ್ಲೋಕಗಳನ್ನು ಕೇಳಿ ಕಂಠಗತಗೊಳಿಸಿಕೊಳ್ಳಲು ಅನುಕೂಲವಿದೆ. |
|
ರೂ. 50/- |
| 2 |
ಮಂಗಳದ ಮುಂಬೆಳಗು
| |
 |
| ‘ಮಂಗಲಸುಪ್ರಭಾತ’ ಭಾರತೀಯವಾದ ಸದಾಚಾರ ಸಮುದ್ರದ ಶ್ರೇಷ್ಠರತ್ನ. ಭಗವನ್ಮಯವಾದ ಬಾಳಾಟವನ್ನು ಮಾಡುವ ಭಕ್ತ ದೇವನನ್ನು ಪ್ರಾತರ್ಮಂಗಲಸ್ಮರಣೆಯೊಂದಿಗೆ ಉತ್ಥಾನಗೊಳಿಸುವ ಸದಾಚಾರ ಭಾರತೀಯತೆಯ ಪ್ರತೀಕ. ಪ್ರಕೃತ ಶ್ರೀರಾಮನ ಲೀಲಾವೈಭವದ ಸುಂದರ ಸಾಹಿತ್ಯದೊಡನೆ ಸುಪ್ರಭಾತವನ್ನು ಶತಾವಧಾನಿ ಡಾ| ಗಣೇಶ್ರವರು ರಚಿಸಿದ್ದಾರೆ. ಶ್ರಿಶ್ರೀಗಳವರ ದಿವ್ಯಾಶೀರ್ವಾದ ಪ್ರಥಮ ಮಂಗಲಶ್ಲೋಕಾನುಗ್ರಹದೊಂದಿಗೆ ಗಾಯಕ ಶ್ರೀ ರಘುನಂದನ ಬೇರ್ಕಡವು ಅವರ ಕಂಠಸಿರಿಯಲ್ಲರಳಿದ ಗಾನ ಪುಷ್ಪವಿದಾಗಿದೆ. |
|
ರೂ. 100/- |
ವಿಡಿಯೋ ಸಿ. ಡಿ |
|
| 1 |
ಗೋವಂಶವೈಭವ
| |
 |
| ಗೋವು ಮಾನವಜೀವನದ ಸಮಸ್ತಕ್ಷೇತ್ರಗಳ ಪರಮಾಪ್ತ ಸಂಗಾತಿ. ಮನುಕುಲದ ಉಳಿವು-ಸಮೃದ್ಧಿಗಳು ಗೋವಂಶದ ಉಳಿವಿನಲ್ಲಡಗಿದೆ. ಭಾರತೀಯ ಗೋವಂಶ ಸೃಷ್ಟಿಯಲ್ಲಿ ಅನ್ಯತಮವಾದುದು. ಪರಿವರ್ತಿತವಾದ ಈ ಕಾಲಘಟ್ಟದಲ್ಲಿ ವಿನಾಶದ ಅಂಚಿನಲ್ಲಿರುವ ಈ ಗೋವುಗಳ ಸಂರಕ್ಷಣೆ-ಸಂವರ್ಧನೆಗಾಗಿ ಶ್ರೀಶ್ರೀಗಳವರ ವಿಶಿಷ್ಟ ಯೋಜನೆಯೇ ಕಾಮದುಘಾ. ಭಾರತೀಯ ಗೋವಂಶ ವೈಭವವನ್ನು ಪರಿಚಯಿಸುವ ವಿಶಿಷ್ಟ ಸಂಗತಿಗಳು ಇಲ್ಲಿ ಸಮ್ಮಿಲಿತಗೊಂಡಿದೆ. |
|
ರೂ. 75/- |
| 2 |
ಅಭಿಜ್ಞಾನ
| |
 |
| ಶ್ರೀಶಂಕರಭಗವತ್ಪಾದರಿಂದ ಸ್ಥಾಪಿತವಾದ ಅವಿಚ್ಛಿನ್ನಪರಂಪರೆಯ ಶ್ರೀರಾಮಚಂದ್ರಾಪುರಮಠದ ಭವ್ಯ ಇತಿಹಾಸವನ್ನು ನೆನಪಿಸುವ ಸಂಗತಿಗಳ ಸಂಕಲನ. ಶ್ರೀಮಠ, ಶಾಖಾಮಠಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಶ್ರೀಗಳವರ ಸಮಾಜಮುಖೀ ಯೋಜನೆಗಳ ವಿಶ್ವರೂಪದರ್ಶನ ಇಲ್ಲಡಗಿದೆ. |
|
ರೂ. 100/- |
| 3 |
ಶ್ರೀರಾಮಾಯಣಮಹಾಸತ್ರ (೩ ಸಿ. ಡಿ)
| |
 |
| ಜಾಗತಿಕ ಇತಿಹಾಸದ ರಾಮಾಯಣದ ಅತಿದೊಡ್ಡ ಹಬ್ಬ ಶ್ರೀರಾಮಾಯಣ ಮಹಾಸತ್ರ. ೧೦ ದಿನಗಳ ಕಾಲ ಶ್ರೀಮಠದ ಪುಣ್ಯಭೂಮಿಯಲ್ಲಿ ಸಂಪನ್ನವಾದ ಸಹಸ್ರಾಧಿಕ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ, ಶ್ರೀರಾಮಪಟ್ಟಾಭಿಷೇಕ, ಸಾಂಸ್ಕೃತಿಕ ಕಾರ್ಯಕ್ರಮವೈವಿಧ್ಯ ಮುಂತಾದ ವೈಭವ-ರೋಚಕಸಂಗತಿಗಳು ಮೇಲನಗೊಂಡು ಮುದನೀಡುವ ರಾಮಾಯಣದ ವಿಶ್ವರೂಪದರ್ಶನ ಮಾಡಿಸುವ ದೃಶ್ಯ ಶ್ರವ್ಯ ಮುದ್ರಿಕೆ. |
|
ರೂ. 250/- |
| 4 |
ಶ್ರೀರಾಮಾಯಣಮಹಾಸತ್ರ (೧೦ ಸಿ. ಡಿ)
| |
 |
| ಜಾಗತಿಕ ಇತಿಹಾಸದ ರಾಮಾಯಣದ ಅತಿದೊಡ್ಡ ಹಬ್ಬ ಶ್ರೀರಾಮಾಯಣ ಮಹಾಸತ್ರ. ೧೦ ದಿನಗಳ ಕಾಲ ಶ್ರೀಮಠದ ಪುಣ್ಯಭೂಮಿಯಲ್ಲಿ ಸಂಪನ್ನವಾದ ಸಹಸ್ರಾಧಿಕ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ, ಶ್ರೀರಾಮಪಟ್ಟಾಭಿಷೇಕ, ಸಾಂಸ್ಕೃತಿಕ ಕಾರ್ಯಕ್ರಮವೈವಿಧ್ಯ ಮುಂತಾದ ವೈಭವ-ರೋಚಕಸಂಗತಿಗಳು ಮೇಲನಗೊಂಡು ಮುದನೀಡುವ ರಾಮಾಯಣದ ವಿಶ್ವರೂಪದರ್ಶನ ಮಾಡಿಸುವ ದೃಶ್ಯ ಶ್ರವ್ಯ ಮುದ್ರಿಕೆ. |
|
ರೂ. 750/- |
ಡಿ. ವಿ. ಡಿ. ವಿಶ್ವಗೋಸಮ್ಮೇಳನ |
|
| 1 |
ವಿಶ್ವಗೋಸಮ್ಮೇಳನ (೪ ಡಿ. ವಿ. ಡಿ.) |
ರೂ. 500/- |
| 2 |
ನಿತ್ಯ ಕಾರ್ಯಕ್ರಮಗಳು (೧೦ ಡಿ. ವಿ. ಡಿ.) |
ರೂ. 1000/- |
| 3 |
ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಯಕ್ಷಗಾನ (೪ ಡಿ. ವಿ. ಡಿ.) |
ರೂ. 500/- |
| 4 |
ಭಜನೆ ಮತ್ತು ವೇಣುವಾದನ (೨ ಡಿ. ವಿ. ಡಿ.) |
ರೂ. 250/- |
| 5 |
ತುಲಾಭಾರ (೨ ಡಿ. ವಿ. ಡಿ.)
| |
 |
| ಭಾರತೀಯ ಗೋವಂಶವನ್ನು ಸಂರಕ್ಷಿಸಿ, ಸಂವರ್ಧಿಸಿ, ಸಂಶೋಧಿಸುವ ಶ್ರೀಶ್ರೀಗಳವರ ವಿಶಿಷ್ಟ ಪರಿಕಲ್ಪನೆಯ ಸೇವಾಯೋಜನೆಯೇ ಕಾಮದುಘಾ. ಗೋಸಂರಕ್ಷಣೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸಲು ಸಂಘಟಿಸಲಾದ ಕಾರ್ಯಕ್ರಮವೇ ವಿಶ್ವಗೋಸಮ್ಮೇಳನ. ಜಾಗತಿಕ ಇತಿಹಾಸದಲ್ಲಿ ಪ್ರಥಮವಾಗಿ ನಡೆದ ಈ ಸಮ್ಮೇಳನದಲ್ಲಿ ಐತಿಹಾಸಿಕವಾಗಿ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಸಂಗತಿಗಳ ದಿವ್ಯದರ್ಶನ. ಅಪೂರ್ವ-ವರ್ಣರಂಜಿತ-ವಿವರಣಾತ್ಮಕ ಸಂಗತಿಗಳ ದೃಶ್ಯ-ಶ್ರವ್ಯ ಮುದ್ರಿಕೆ. |
|
ರೂ. 250/- |
| 6 |
ಸೇವಾವಾಹಿನಿ (೨ ಡಿ. ವಿ. ಡಿ.)
| |
 |
| ಶ್ರಿಶ್ರೀಗಳವರ ಸಮಾಜ ಸಂಘಟನೆಯ ವಿಶಿಷ್ಟ ಪರಿಕಲ್ಪನೆಯೇ ಸೇವಾವಾಹಿನಿ. ಸಂಸ್ಕಾರ-ಸಮರ್ಪಣೆ-ಸದ್ಭಾವನೆಗಳ ಸಂಪನ್ನತೆಯನ್ನು ಸಮಾಜದಲ್ಲಿ ರೂಢಿಸಲು ತನ್ಮೂಲಕ ಸ್ವಸ್ಥಸಮಾಜ ನಿರ್ಮಿಸಲು ಸ್ವಯಂ ಸೇವಕರ ಸೈನ್ಯವೇ ಸೇವಾವಾಹಿನಿ. ಈ ವಾಹಿನಿಯ ಕಾರ್ಯಚಟುವಟಿಕೆಗಳ ಚಿತ್ರಣ ಇಲ್ಲಿ ನಿರೂಪಿತವಾಗಿದೆ. |
|
ರೂ. 250/- |
| 7 |
ದೀಪೋತ್ಸವ (೨ ಡಿ. ವಿ. ಡಿ.) |
ರೂ. 250/- |