ಶ್ರೀಮಠವು ಕೊಡಮಾಡುವ ಇತರೇ ಸೇವೆಗಳು
ಶ್ರೀಮಠವು ವೇದ ಶಾಸ್ತ್ರಾಧ್ಯಯನ ಮಾಡುವ ಮತ್ತು ಆಧುನಿಕ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದೆ.
ವಿದ್ಯಾದಾನ: ವಿದ್ಯಾರ್ಥಿ ವೇತನ ಮತ್ತು ಪ್ರಾಯೋಜಕತ್ವದ ಮೂಲಕ ಬಡ ವಿದ್ಯಾರ್ಥಿಗಳ ಆರ್ಥಿಕ ನಿರ್ವಹಣೆ.
ಆರ್ತತ್ರಾಣ ನಿಧಿ: ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರ ಅಥವಾ ಅನಾಥರ ಕಣ್ಣೀರನ್ನೊರೆಸುವ ಭಾಗ್ಯನಿಧಿ.
ಕಲ್ಯಾಣ ನಿಧಿ: ವಿವಾಹಾದಿ ಶುಭಕಾರ್ಯಗಳಿಗೆ ಮತ್ತು ಗೃಹನಿರ್ಮಾಣಕ್ಕೆ ಆರ್ಥಿಕ ಸಹಾಯ ಒದಗಿಸುವ ಭಾಗ್ಯನಿಧಿ.
ಜೀವನದಾನ: ಜೀವನದಲ್ಲಿ ನೊಂದ ಕುಟುಂಬವನ್ನು ದತ್ತು ಸ್ವೀಕರಿಸಿ ಕ್ಷೇಮಾಭಿವೃದ್ಧಿಯನ್ನು ಒದಗಿಸುವುದು.
ವಾನಪ್ರಸ್ಥ: ಬಾಳ ಸಂಧ್ಯಾಕಾಲವನ್ನು ಸಚ್ಚಿಂತನೆಗಳ ಮೂಲಕ ಸಂತೃಪ್ತಿಯಿಂದ ಕಳೆಯುವ ವೃದ್ಧರ ಆಶ್ರಯ ತಾಣ.
ಅಗ್ನಿಶರಣಂ: ವಿನಾಶದ ಅಂಚಿನಲ್ಲಿರುವ ಅಗ್ನಿಹೋತ್ರ, ಶ್ರೌತಸ್ಮಾರ್ತ ಯಜ್ಞ ಪ್ರಕ್ರಿಯಗಳ ಸಂರಕ್ಷಣೆ.
ಮುಷ್ಟಿಭಿಕ್ಷಾ: ಸಹಸ್ರಾರು ಸ್ತ್ರೀಯರು ಪ್ರತಿನಿತ್ಯ ಒಂದು ಹಿಡಿ ಅಕ್ಕಿಯನ್ನು ಸಮರ್ಪಣಾ ಭಾವದಿಂದ ತೆಗೆದಿರಿಸುವ ಯೋಜನೆ. ಅನಾಥರು ಮತ್ತು ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳು.
ನಾರೀನಿಕೇತನ: ಸ್ತ್ರೀಶಿಕ್ಷಣ ಪ್ರೋತ್ಸಾಹ ಮತ್ತು ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ. ಸಿದ್ದಾಪುರ, ಬೆಂಗಳೂರುಗಳಲ್ಲಿ ಈ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ.
ಮಹಿಳೋದಯ ಮತ್ತು ಅನುಗ್ರಹ: ಮಹಿಳೆಯರಲ್ಲಿ ಸಾಮರಸ್ಯ, ಸಹಕಾರ, ಸಂಘಟನೆಗಳನ್ನು ಸಾಧಿಸುವ ವ್ಯವಸ್ಥೆ. ಕರಕುಶಲ ಹಾಗು ಗೃಹೋತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹ ಹಾಗು ಮಾರಾಟದ ಅವಕಾಶ ಹೊಂದಿದೆ.
ಪುನರುಜ್ಜೀವಿನಿ: ಜೀರ್ಣಾವಸ್ಥೆಯಲ್ಲಿರುವ ದೇವಾಲಯಗಳಿಗೆ ಪುನರಿಜ್ಜೀವನ ಕಲ್ಪಿಸುವುದು
ಶ್ರೀಭಾರತೀ ಪ್ರಕಾಶನ: ಧರ್ಮ ಪ್ರಸಾರಕ್ಕಾಗಿ ಪತ್ರಿಕೆಗಳ ಪ್ರಕಟನೆ ಮತ್ತು ಮೌಲಿಕ ಗ್ರಂಥಗಳ ಪ್ರಕಾಶನ. ಈಗಾಗಲೇ ’ಧರ್ಮಭಾರತೀ’ ಮತ್ತು ’ಶ್ರೀಮುಖ’ ಪತ್ರಿಕೆಗಳು ಧರ್ಮಪ್ರಸಾರ ಕಾರ್ಯದಲ್ಲಿ ನಿರತವಾಗಿದ್ದು ಹಲವು ಉಪಯುಕ್ತ ಗ್ರಂಥಗಳನ್ನು ಪ್ರಕಾಶನಗೊಳಿಸಿದೆ.
ಉಪಾಸನ: ಭಾರತೀಯ ಯೋಗ ವಿದ್ಯೆಯನ್ನು ಪುನರುತ್ಥಾನಗೊಳಿಸುವ ಉದ್ದೇಶ ಹೊಂದಲಾಗಿದೆ. ಹೊಸನಗರ ಮತ್ತು ಬೆಂಗಳೂರು ನಗರಗಳಲ್ಲಿ ಅಷ್ಟಾಂಗಯೋಗ ತರಗತಿಗಳು ನಡೆಯುತ್ತಿವೆ.
ಗ್ರಹಯಾಗ: ಕೌಟುಂಬಿಕ ಸಮಸ್ಯೆಗಳೇ ಮೊದಲಾದವುಗಳಿಗೆ ಪರಿಹಾರವನ್ನು ಸಾಂತ್ವನ, ಜ್ಯೋತಿಶ್ಯಾಸ್ತ್ರ, ವೇದೋಕ್ತ ಅರ್ಚನ ಹವನಾದಿಗಳ ಮೂಲಕ ಕಂಡುಕೊಳ್ಳಲು ರೂಪಿಸಿದ ಯೋಜನೆ.
ಸೇವಾಸೇತು: ಶ್ರೀಮಠದ ಸೇವಾಯೋಜನೆಗಳಲ್ಲಿ ಸಮಾಜದ ಎಲ್ಲ ವರ್ಗಗಳ ಎಲ್ಲ ವಯೋಮಾನದ ಜನರು ಭಾಗಿಗಳಾಗಲು ಅವಕಾಶವಿರುವ ವ್ಯವಸ್ಥೆ.












