ಕಾಮದುಘಾ

ಭಾರತೀಯ ಗೋವಂಶದ ಸಂರಕ್ಷಣೆ, ಸಂವರ್ಧನೆಗಳನ್ನು ಜನಜಾಗೃತಿ, ಶಿಕ್ಷಣ ಹಾಗೂ ಧನಾತ್ಮಕ ಕಾರ್ಯಗಳ ಮೂಲಕ ಸಾಧಿಸುವ ವಿಶಿಷ್ಟ ಯೋಜನೆ. ಶ್ರೀಮಠವು ಈ ಉದ್ದೇಶವನ್ನು ಸಾಧಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಅಳಿವಿನ ಅಂಚಿನಲ್ಲಿರುವ ಭಾರತೀಯ ಗೋಸಂತತಿಯನ್ನು ಸಂರಕ್ಷಿಸುವ ಉದ್ದೇಶದಿಂದ ಈಗಾಗಲೇ 30 ತಳಿಗಳನ್ನು ಸಂಗ್ರಹಿಸಿ ಸಂರಕ್ಷಿಸಲಾಗುತ್ತಿದೆ.ಈ ತಳಿಗಳಿರುವ ಪ್ರಧಾನ ಮಠದ ಅಮೃತಧಾರಾ ಗೋ ಶಾಲೆಯು ದೇಶ ವಿದೇಶಗಳ ವೀಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.

ಬೆಂಗಳೂರಿನ ಕಗ್ಗಲೀಪುರ, ಮೈಸೂರು, ಮಂಗಳೂರಿನ ಮುಳಿಯ, ಕೇರಳದ ಬಜಕ್ಕೂಡ್ಲು ಮತ್ತು ಮುಂಬಯಿಗಳಲ್ಲಿ ಶ್ರೀ ಮಠವು ಗೋಶಾಲೆಗಳನ್ನು ನೆಡೆಸುತ್ತಿದೆ.

ಗೋವಿನ ವಿವಿಧ ಉತ್ಪನ್ನಗಳು ಹಾಗು ಅವುಗಳ ಪ್ರಯೋಜನಗಳ ಕುರಿತು ಸಂಶೋಧನೆ ನಡೆಸಲಾಗುತ್ತಿದೆ.

ಭಾರತೀಯ ಗೋತಳಿಗಳ ಸಂರಕ್ಷಣೆಗಾಗಿ ರೈತರಿಗೆ ಗೋವುಗಳನ್ನು ವಿತರಿಸಲಾಗುತ್ತದೆ.

ಔಷಧೀಯ ಗುಣಗಳನ್ನು ಹೊಂದಿರು ಗೋಮೂತ್ರದ ಅರ್ಕ ಮುಂತಾದ ಔಷಧಿಗಳನ್ನು ಸಿದ್ಧಪಡಿಸಿ ವಿತರಿಸುವ ಹಾಗು ಅದರ ಮಹತ್ವವನ್ನು ಸಾರುವ ಕಾರ್ಯ ಕೈಗೊಳ್ಳಲಾಗುತ್ತದೆ.

ನಿತ್ಯೋಪಯೋಗಿಯಾದ ವಿಶಿಷ್ಟ ಗುಣಗಳಿಂದ ಕೂಡಿದ ಸಾಬೂನು, ಶ್ಯಾಂಪೂ, ದಂತಮಂಜನ, ಧೂಪಗಳನ್ನು ತಯಾರಿಸಲಾಗುತ್ತಿದೆ.

ಕ್ಯಾನ್ಸರ್ ಮುಂತಾದ ವಿವಿಧ ರೋಗಗಳನ್ನು ಗವ್ಯೋತ್ಪನ್ನಗಳಿಂದ ಗುಣಪಡಿಸಲು ಗವ್ಯಚಿಕಿತ್ಸಾ ಕೇಂದ್ರಗಳನ್ನು ವಿವಿಧೆಡೆ ಆರಂಭಿಸಿದೆ.

ವಿನಾಶದ ಅಂಚಿನಲ್ಲಿರುವ ಭಾರತೀಯ ಗೋತಳಿಗಳ ಮಹತ್ವ ಹಾಗೂ ಸಂರಕ್ಷಣೆಯ ಅವಶ್ಯಕತೆಯನ್ನು ಜನಸಮುದಾಯಕ್ಕೆ ತಿಳಿಯಪಡಿಸುವ ಉದ್ದೇಶದಿಂದ ’ಭಾರತೀಯ ಗೋಯಾತ್ರೆಯನ್ನು ಸಂಘಟಿಸಲಾಗಿದೆ.

ಗೋಬ್ಯಾಂಕ್: ಭಾರತೀಯ ತಳಿಯ ಗೋಸಂಪತ್ತಿನ ಸಮೃದ್ಧಿಗಾಗಿ ಹಣದ ವ್ಯವಹಾರವಿಲ್ಲದೆ, ಗೋವುಗಳನ್ನು ಸಾಲರೂಪದಲ್ಲಿ ಕೊಡುವುದು ಮತ್ತು ಸ್ವೀಕರಿಸುವುದು ಹಾಗೂ ಪಾಲನೆಯೇ ಧ್ಯೇಯವಾಗಿರುವ ಬ್ಯಾಂಕ್ ಯೋಜನೆ.

ಗವ್ಯ ಡೈರಿ: ಗೋಮೂತ್ರ ಮತ್ತು ಗೋಮಯ ಗಳನ್ನು ಖರೀದಿಸುವ ಮೂಲಕ ಗೋವು ಜೀವಿಸಿರುವ ತನಕ ಅದರಿಂದ ಸಂಪಾದನೆಯ ದಾರಿ ತೋರಿ ಗೋವನ್ನು ಕಸಾಯಿ ಖಾನೆಯಿಂದ ರಕ್ಷಿಸುವುದು.