ಸಂಜೀವಿನಿ
ಆರೋಗ್ಯ ಭಾಗ್ಯವನ್ನು ಕರುಣಿಸುವ ಮಹತ್ವದ ಯೋಜನೆ. ಚಿಕಿತ್ಸಾಲಯ, ಸಂಚಾರೀ ಚಿಕಿತ್ಸಾಲಯ, ವೈದ್ಯಕೀಯ ಶಿಬಿರ ಮತ್ತು ರಕ್ತದಾನ ಶಿಬಿರಗಳನ್ನು ಈ ವ್ಯವಸ್ಥೆಯು ಒಳಗೊಂಡಿರುತ್ತದೆ. ಬಡಜನರಿಗೆ ಉಚಿತೆ ಚಿಕಿತ್ಸೆ, ಆರ್ಥಿಕ ಸಹಾಯವನ್ನು ಒದಗಿಸಲಾಗುವುದು.
ಕೇರಳದ ಮುಜುಂಗಾವಿನ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯವು ಸುಸಜ್ಜಿತ ಶಸ್ತ್ರ ಚಿಕಿತ್ಸಾ ವಿಭಾಗವನ್ನು ಹೊಂದಿ ನೇತ್ರರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಅಥವಾ ಉಚಿತ ಚಿಕಿತ್ಸೆನೀಡಿ ದೃಷ್ಟಿ ಭಾಗ್ಯವನ್ನು ಕರುಣಿಸುತ್ತಿದೆ.ಕಣ್ಣಿನ ಬ್ಯಾಂಕ್ ಹೊಂದಿರುವುದು ಇದರ ವಿಶೇಷ ಸಂಗತಿ.
ಕಾಸರಗೋಡಿನ ಮುಳ್ಳೇರಿಯಾದ ಪುಣ್ಯಕೋಟಿ ಅರ್ಬುದ ಚಿಕಿತ್ಸೆ ಜಾಗೃತಿ ಮತ್ತು ಸಂಶೋಧನಾ ಚಿಕಿತ್ಸಾಲಯವು ಗವ್ಯ ಚಿಕಿತ್ಸೆಯ ಮೂಲಕ ಕ್ಯಾನ್ಸರ್ ರೋಗವನ್ನು ಗುಣಪಡಿಸುವ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸುತ್ತಿದೆ.ಆಯುರ್ವೇದ ಹಾಗೂ ಹೋಮಿಯೋಪತಿ ಚಿಕಿತ್ಸೆಯೂ ಇಲ್ಲಿ ಲಭ್ಯವಿದೆ.
ಶ್ರೀ ಮಠದ ಸಂಚಾರೀ ಚಿಕಿತ್ಸಾಲಯಗಳು ಕೇರಳ ಮತ್ತು ಕರ್ನಾಟಕ ಗ್ರಾಮಾಂತರ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ನೀಡುವಲ್ಲಿ ನಿರತವಾಗಿವೆ.












