ಶ್ರೀ ಭಾರತೀ ಗುರುಕುಲ ವಿಶ್ವವಿದ್ಯಾಲಯ
ಭಾರತೀಯ ವಿದ್ಯೆ ಹಾಗೂ ಕಲೆಗಳ ಅಧ್ಯಯನ, ಅಧ್ಯಾಪನ, ಸಂಶೋಧನೆಗಳಿಗಾಗಿ ತಕ್ಷಶಿಲಾ ಮಾದರಿಯಲ್ಲಿ ರೂಪುಗೊಳ್ಳುತ್ತಿರುವ ವಿಶಿಷ್ಟ ಯೋಜನೆ.ಚತುರ್ವೇದಗಳು, ಉಪವೇದಗಳಾದ ಆಯುರ್ವೇದ, ಸಂಗೀತ, ಅರ್ಥಶಾಸ್ತ್ರ, ವಾಸ್ತು, ಆಗಮ ಮತ್ತು ಶಿಲ್ಪಕಲೆಗಳ ಅಧ್ಯಯನದ ಉದ್ದೇಶಿತ ವಿಶ್ವವಿದ್ಯಾಲಯವು ಭಾರತೀಯ ಸಂಸ್ಕೃತಿಯ ಪುನರುಜ್ಜೀವನಕ್ಕೆ ಮಾರ್ಗವಾಗಲಿದೆ.
ವಿಶ್ವವಿದ್ಯಾಲಯದ ವಿಭಾಗಗಳು
ಶ್ರೀ ಭಾರತೀ ಗುರುಕುಲ: ಪ್ರಾಚೀನ ಪದ್ದತಿಯಂತೆ ವೇದಾಧ್ಯಯನ, ಸಂಸ್ಕೃತ, ಭಾರತಿಯ ಸಂಸ್ಕೃತಿ ಅಧ್ಯಯನದ ಆರ್ಷ ಶಾಖೆ ವೇದ ಸಂಸ್ಕೃತಾಧ್ಯಯನಗಳ ಜೊತೆಗೆ ಆಧುನಿಕ ಶಿಕ್ಷಣವನ್ನು ನೀಡುವ ’ನವೀನ ಶಾಖೆ’.
ಶ್ರೀ ಮಾತಾ ಗುರುಕುಲ: ಭಾರತೀಯ ನಾರಿತ್ವದ ಆದರ್ಶಗಳನ್ನು ಬಿಂಬಿಸುವ ಭಾರತೀಯ ಸಂಸ್ಕೃತಿಯ ಅಧ್ಯಯನದ ಜೊತೆಗೆ ಅಧುನಿಕ ಪಠ್ಯಗಳಾದ ವಿಜ್ಞಾನ, ಗಣಿತ, ಇಂಗ್ಲಿಷ್, ಕಂಪ್ಯೂಟರ್ ಮತ್ತು ಲಲಿತ ಕಲೆಗಳನ್ನು ಭೋದಿಸಲಾಗುತ್ತಿದೆ. ಕೃಷಿ, ಪಾಕಶಾಸ್ತ್ರ, ಪಶುಸಂಗೋಪನೆಗಳನ್ನು ಪರಿಚಯಿಸಲಾಗುತ್ತಿದೆ.
ಶ್ರೀ ಭಾರತೀ ಪತ್ರಧಾಮ: ಸಂಸ್ಕೃತ –ಸಂಸ್ಕೃತಿ ಸಂಶೋಧನಾ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಪತ್ರಧಾಮವು ಪ್ರಾಚೀನವಾದ ಅಮೂಲ್ಯ ಓಲೆ ಗ್ರಂಥಗಳನ್ನು ಸಂಗ್ರಹಿಸುತ್ತಿದೆ. ಚಿರನೂತನವು ಪ್ರಾಚೀನ ವಸ್ತುಗಳ ಸಂಗ್ರಹಾಲಯವಾಗಿ ಪ್ರಸಿದ್ಧವಾಗುತ್ತಿದೆ.












